ದಯವಿಟ್ಟು ಶೋಧವಾಣಿ ನ್ಯೂಸ್ ಓದಿ. ಪ್ರೋತ್ಸಾಹಿಸಲು ಮನವಿ. ಪ್ರತಿಕ್ಷಣದ ವರದಿಗಳು ಓದಿ. ರಚನಾತ್ಮಕ ಹಾಗೂ ಮೌಲಿಕ ಲೇಖನಗಳು ಪ್ರಕಟಿಸಲಾಗುವುದು. ಇಮೇಲ್ ಮೂಲಕ ಕಳಿಸಿ. ನಿಮ್ಮ ಆತ್ಮೀಯ ಗೆಳೆಯರಿಗೆ ಲಿಂಕ್ ಶೇರ್ ಮಾಡಿ. ಧನ್ಯವಾದಗಳು
Kannadigas Welfare Society
Editor in chief : Dharmendra Poojari Bagduri MA, Phd ಧರ್ಮೇಂದ್ರ ಪೂಜಾರಿ ಬಗ್ದೂರಿ MA, Phd email: kannadigawelfare@gmail.com, kannadawelfaresociety.blogspot.com, website:kannadawelfaresociety.org
Sunday, January 5, 2025
ರಾಜ್ಯ ಮಟ್ಟದ ಯುವಜನೋತ್ಸವಕ್ಕೆ ಚಾಲನೆ ಯುವ ಜನತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ
Saturday, December 21, 2024
ನವ ಕುವೈತ್ ನಿರ್ಮಾಣಕ್ಕೆ ಭಾರತೀಯ ಮಾನವಶಕ್ತಿ, ಕೌಶಲ್ಯ ನೆರವು: ಪ್ರಧಾನಿ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಶನಿವಾರದಂದು ಕುವೈತ್ನಲ್ಲಿ ಭಾರತೀಯ ಸಮುದಾಯವನ್ನುದ್ದೇಶಿಸಿ ಮಾತನಾಡಿದ್ದು, ಹೊಸ ಕುವೈತ್ ಗೆ ಅಗತ್ಯವಿರುವ ಮಾನವಶಕ್ತಿ, ಕೌಶಲ್ಯ ತಂತ್ರಜ್ಞಾನವನ್ನು ಭಾರತ ಹೊಂದಿದೆ ಎಂದು ಹೇಳಿದ್ದಾರೆ.
ಕುವೈತ್ ಎಮಿರ್ ಶೇಖ್ ಮೆಶಾಲ್ ಅಲ್-ಅಹ್ಮದ್ ಅಲ್-ಜಾಬರ್ ಅಲ್-ಸಬಾಹ್ ಅವರ ಆಹ್ವಾನದ ಮೇರೆಗೆ ಕುವೈತ್‌ಗೆ ಮೋದಿ ಭೇಟಿ ನೀಡಿದ್ದಾರೆ. ಕುವೈತ್‌ಗೆ 43 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಭಾರತದ ಪ್ರಧಾನಿಯೊಬ್ಬರು ಭೇಟಿ ನೀಡಿದ್ದಾರೆ.
"ಭಾರತದಿಂದ ಇಲ್ಲಿಗೆ ತಲುಪಲು ನಿಮಗೆ ನಾಲ್ಕು ಗಂಟೆಗಳು ಬೇಕಾಗುತ್ತದೆ ಆದರೆ ಭಾರತದ ಪ್ರಧಾನಿಯೊಬ್ಬರು ಕುವೈತ್‌ಗೆ ಪ್ರಯಾಣಿಸಲು ನಾಲ್ಕು ದಶಕಗಳನ್ನು ತೆಗೆದುಕೊಂಡರು" ಎಂದು ಅವರು ಹೇಳಿದರು.
ಕೊನೆಗೂ ಫಡ್ನವಿಸ್ ಸಂಪುಟ ಸಚಿವರಿಗೆ ಖಾತೆ ಹಂಚಿಕೆ
ಮುಂಬೈ: ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ಹಾಗೂ ಸಂಪುಟ ಅಸ್ತಿತ್ವಕ್ಕೆ ಬಂದ ಹಲವು ದಿನಗಳ ಬಳಿಕ ಕೊನೆಗೂ ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗಿದೆ.
ಮಹತ್ವದ ಗೃಹ ಖಾತೆಯನ್ನು ಸಿಎಂ ದೇವೇಂದ್ರ ಫಡ್ನವಿಸ್ ತಮ್ಮ ಬಳಿಯೇ ಇಟ್ಟುಕೊಂಡಿದ್ದಾರೆ. ಡಿಸಿಎಂ ಹಾಗೂ ಶಿವಸೇನೆ ನಾಯಕ ಏಕನಾಥ್ ಶಿಂಧೆ ನಗರಾಭಿವೃದ್ಧಿ, ವಸತಿ ಮತ್ತು ಸಾರ್ವಜನಿಕ ಕಾರ್ಯಗಳ ಸಚಿವಾಲಯ ಪಡೆದಿದ್ದಾರೆ.ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರಿಗೆ ರಾಜ್ಯ ಅಬಕಾರಿ ಜೊತೆಗೆ ಹಣಕಾಸು ಮತ್ತು ಯೋಜನೆ ಖಾತೆಯನ್ನು ನೀಡಲಾಗಿದೆ. ಮಹಾಯುತಿ ಸರ್ಕಾರ ಭಾನುವಾರ ತನ್ನ ಸಂಪುಟ ವಿಸ್ತರಣೆಯಿಂದ ಹಲವಾರು ನಾಯಕರನ್ನು ಕೈಬಿಟ್ಟ ನಂತರ ಈ ಬೆಳವಣಿಗೆಯಾಗಿದೆ.
ಮಹಾರಾಷ್ಟ್ರ ವಿಧಾನಸಭೆಯ ಬಜೆಟ್ ಅಧಿವೇಶನ ಮಾರ್ಚ್ 3 ರಂದು ಮುಂಬೈನಲ್ಲಿ ಆರಂಭವಾಗಲಿದೆ.
ಪ್ರಮುಖ ಖಾತೆ ಹಂಚಿಕೆ ವಿವರ ಹೀಗಿದೆ:
ಉದಯ್ ಸಮಂತ್: ಕೈಗಾರಿಕೆ, ಮರಾಠಿ ಭಾಷೆ
ಅಶೋಕ್ ಯುಕೆ: ಬುಡಕಟ್ಟು ಅಭಿವೃದ್ಧಿ,
ಸಂಜಯ್ ಪ್ರಮೀಳಾ: ಮಣ್ಣು ಮತ್ತು ಜಲ ಸಂರಕ್ಷಣೆ
ಮಂಗಲ್ ಪ್ರಭಾತ್: ಕೌಶಲ್ಯ ಅಭಿವೃದ್ಧಿ, ಉದ್ಯೋಗ, ಉದ್ಯಮಶೀಲತೆ ಮತ್ತು ನಾವೀನ್ಯತೆ
ಜಯಕುಮಾರ್ ರಾವಲ್: ಮಾರ್ಕೆಟಿಂಗ್, ಪ್ರೋಟೋಕಾಲ್
ಪಂಕಜಾ ಮುಂಡೆ: ಪರಿಸರ ಮತ್ತು ಹವಾಮಾನ ಬದಲಾವಣೆ, ಪಶುಸಂಗೋಪನೆ
ಅತುಲ್ ಸೇವ್: OBC ಕಲ್ಯಾಣ, ಡೈರಿ ಅಭಿವೃದ್ಧಿ ಮತ್ತು ನವೀಕರಿಸಬಹುದಾದ ಇಂಧನ
ಶಂಭುರಾಜ್ ದೇಸಾಯಿ: ಪ್ರವಾಸೋದ್ಯಮ, ಗಣಿಗಾರಿಕೆ, ಮಾಜಿ ಸೇವಾ ಪುರುಷರ ಕಲ್ಯಾಣ
ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸಭೆ : ಸಮರ್ಪಕವಾಗಿ ಯೋಜನೆಗಳ ಜಾರಿಗೊಳಿಸಿ ಫಲಾನುಭವಿಗಳಿಗೆ ಲಾಭ ದೊರಕಿಸಿ
ವಿಜಯಪುರ, ಡಿಸೆಂಬರ್ : ಜಿಲ್ಲೆಯಲ್ಲಿ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ಜಾರಿಗೊಳಿಸಿ ಅರ್ಹ ಎಲ್ಲ ಫಲಾನುಭವಿಗಳಿಸಿ ಲಾಭ ದೊರಕಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಸಕ್ರೀಯವಾಗಿ ಕಾರ್ಯನಿರ್ವಹಿಸುವಂತೆ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಇಲಿಯಾಸ್ ಅಹ್ಮದ ಬೋರಾಮಣಿ ಬಿನ್ ಮಹಿಬೂಬಸಾಬ ಬೋರಾಮಣಿ ತಿಳಿಸಿದರು.
ಶನಿವಾರ ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜರುಗಿದ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಐದು ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ವಿಜಯಪುರ ಜಿಲ್ಲೆಯು ಎರಡನೆಯ ಸ್ಥಾನದಲ್ಲಿದೆ. ಜಿಲ್ಲೆಗೆ ಪ್ರಥಮ ಸ್ಥಾನ ದೊರಕಿಸಲು ಅಧಿಕಾರಿಗಳು ಸಕ್ರೀಯವಾಗಿ ಕಾರ್ಯನಿರ್ವಹಿಸಿ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವಂತೆ ಅವರು ಹೇಳಿದರು.
ಜಿಲ್ಲೆಯಲ್ಲಿ ಪಂಚ ಯೋಜನೆಗಳ ತಿಳುವಳಿಕೆ ಇದ್ದರು ಸಹಿತ ವಿವಿಧ ಮೂಲಗಳಿಂದ ಹೆಚ್ಚಿನ ಪ್ರಚಾರ ಮಾಡಿ ಅರ್ಹ ಎಲ್ಲಾ ಫಲಾನುಭವಿಗಳಿಗೂ ಯೋಜನೆಗಳ ಲಾಭ ಮಟ್ಟುವಂತೆ ಮಾಡಬೇಕು. ಶಕ್ತಿ ಯೋಜನೆಯಲ್ಲಿ ಫಲಾನುಭವಿಗಳ ಹಾಗೂ ವಿದ್ಯಾರ್ಥಿಗಳ ಬಸ್ಸುಗಳ ಬೇಡಿಕೆಗೆ ಅನುಗುಣವಾಗಿ ಅಧಿಕಾರಿಗಳು ಸಲ್ಲಿಸಿದ ಪ್ರಸ್ತಾವನೆ ಪ್ರಕಾರ ನಮ್ಮ ಜಿಲ್ಲೆಗೆ ಇನ್ನೂ ೨೦೦ ಹೊಸ ಬಸ್ಸುಗಳ ಮಂಜೂರಾತಿಗಾಗಿ ಸರ್ಕಾರ ಮಟ್ಟದಲ್ಲಿ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರ ಮೂಲಕ ಸರ್ಕಾರದ ಗಮನ ಸೆಳೆಯುವುದಾಗಿ ಅವರು ತಿಳಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಷಿ ಆನಂದ ಅವರು ಮಾತನಾಡಿ, ಅನ್ನ ಭಾಗ್ಯ , ಗೃಹ ಲಕ್ಮೀ ಹಾಗೂ ಯುವ ನಿಧಿಯ ಯೋಜನೆಗಳಲ್ಲಿ ಸಣ್ಣ ಪುಟ್ಟ ತಾಂತ್ರಿಕ ಸಮಸ್ಯೆಗಳನ್ನು ಅಧಿಕಾರಿಗಳ ಹಂತದಲ್ಲಿ ಸರಿಪಡಿಸಬೇಕು ಹಾಗೂ ಸರ್ಕಾರಕ್ಕೆ ಸಲ್ಲಿಸಬೇಕಾದ ಪ್ರಸ್ತಾವನೆಗಳನ್ನು ಸರ್ಕಾರಕ್ಕೆ ಸಲ್ಲಿಸಲು ತಿಳಿಸಿದರು. ಜಿಲ್ಲಾ ಮಟ್ಟದ ಸಮಿತಿಯಂತೆ ತಾಲೂಕಾ ಮಟ್ಟದ ಸಮಿತಿಗಳು ಸಕ್ರಿಯವಾಗಿ ಕಾರ್ಯನಿರ್ವಹಿಸುವಂತೆ ಅವರು ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಉಪಾಧ್ಯಕ್ಷರಾದ ಸದ್ದಾಂ ಕುಂಟೋಜಿ ಹಾಗೂ ಹೊನ್ನಮಲ್ಲ ಸಾರವಾಡ, ಸಮಿತಿಯ ಸದಸ್ಯರುಗಳು, ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು. ಜಿಲ್ಲಾ ಪಂಚಾಯತಿಯ ಮುಖ್ಯ ಯೋಜನಾಧಿಕಾರಿ ಎನ್.ಕೆ.ಗೋಠೆ ಸ್ವಾಗತಿಸಿ, ಕೊನೆಯಲ್ಲಿ ವಂದಿಸಿದರು.
ಗೋಲಗುಮ್ಮಟಕ್ಕೆ ಸೌರಶಕ್ತಿ ದೀಪಾಲಂಕಾರಕ್ಕೆ ಸಚಿವ ಡಾ.ಎಂ.ಬಿ.ಪಾಟೀಲ ಚಾಲನೆ
ವಿಜಯಪುರ : ಐತಿಹಾಸಿಕ ಸ್ಮಾರಕಗಳನ್ನು ಹೊಂದಿರುವ ಹಾಗೂ ವಿಶ್ವಗುರು ಬಸವಣ್ಣನವರ ಜನ್ಮಸ್ಥಳವಾದ ವಿಜಯಪುರ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ದಿಗೆ ವಿಫುಲ ಅವಕಾಶಗಳಿದ್ದು, ಜಿಲ್ಲೆಯು ಅಭಿವೃದ್ದಿ ಪಥದಲ್ಲಿ ಸಾಗುತ್ತಿದೆ. ನಗರ-ಜಿಲ್ಲೆ ಸೌಂದರ್ಯಿಕರಣ-ಅಭಿವೃದ್ದಿಯಲ್ಲಿ ಸಾರ್ವಜನಿಕರ ಪಾತ್ರ ಅತ್ಯಂತ ಮುಖ್ಯವಾಗಿದ್ದು, ಸಾರ್ವಜನಿಕರು ಜಿಲ್ಲೆಯ ಅಭಿವೃದಿಗೆ ಕೈ ಜೋಡಿಸಬೇಕು ಎಂದು ಅವರು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ದಿ ಖಾತೆ, ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಎಂ.ಬಿ.ಪಾಟೀಲ ಅವರು ಹೇಳಿದರು.
ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ ಹಾಗೂ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಹಾಗೂ ರಿನ್ಯೂ ಪ್ರೈವೆಟ್ ಲಿಮಿಟೆಡ್ ಸಂಸ್ಥೆ ಇವರ ಸಹಯೋಗದಲ್ಲಿ ಗೋಳಗುಮ್ಮಟ ಸ್ಮಾರಕಕ್ಕೆ ಸೌರಶಕ್ತಿ ವಿದ್ಯತ್ ದೀಪಾಲಂಕರ ಲೋಕಾರ್ಪಣೆಗೊಳಿಸಿ ಮಾತಾನಾಡಿದ ಅವರು, ಐತಿಹಾಸಿಕ ಸ್ಮಾರಕಗಳನ್ನು ಹೊಂದಿರುವ ವಿಜಯಪುರ ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ಒತ್ತು ನೀಡಿ, ಅಂತರರಾಷ್ಟಿçÃಯ ಮಟ್ಟದಲ್ಲಿ ಮನ್ನಣೆ ದೊರಕಿಸುವ ನಿಟ್ಟಿನಲ್ಲಿ ಹಲವು ಅಭಿವೃದ್ದಿ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ದಿ ಖಾತೆ, ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಎಂ.ಬಿ.ಪಾಟೀಲ ಅವರು ಹೇಳಿದರು.
೪೦೦ ವರ್ಷಗಳ ಐತಿಹಾಸಿಕ ಗೋಲಗುಮ್ಮಟಕ್ಕೆ ರಿನಿವೆಬಲ್ ಎನರ್ಜಿ ಸಿಎಸ್ ಅರ್ ಅನುದಾನದಡಿ ದೀಪಾಲಂಕಾರ ವ್ಯವಸ್ಥೆಗೆ ಇಂದು ಚಾಲನೆ ನೀಡಲಾಗಿದೆ. ವಿಜಯಪುರ ನಗರ-ಜಿಲ್ಲೆಯ ಆಕರ್ಷಣೀಯ ಪ್ರವಾಸಿ ತಾಣವನ್ನಾಗಿಸುವ ನಿಟ್ಟಿನಲ್ಲಿ ಕ್ರಮ ವಹಿಸಲಾಗುತ್ತಿದ್ದು, ಪ್ರವಾಸೋದ್ಯಮದಿಂದ ಜಿಲ್ಲೆಯ ವಾಪಾರ-ವಹಿವಾಟಿಗೆ ಉತ್ತೇಜನ ದೊರತು, ಉದ್ಯೋಗ ಸೃಷ್ಟಿಯೊಂದಿಗೆ ಆರ್ಥಿಕ ವ್ಯವಸ್ಥೆ ಸುಧಾರಣೆಯಾಗಲಿದೆ ಎಂದು ಅವರು ಹೇಳಿದರು.
ವ್ಯಾಟಿಕನ್ ಸಿಟಿಯಲ್ಲಿರುವ ಸೇಂಟ್ ಪೀರ‍್ಸ್ ಚರ್ಚ್ ನಂತರ ವಿಶ್ವದ ೨ನೇ ಅತಿ ದೊಡ್ಡ ಗೋಪುರ ಹೊಂದಿರುವ ಗೋಲಗುಮ್ಮಟ ವಿಜಯಪುರದಲ್ಲಿರುವುದು ಅತ್ಯಂತ ಹೆಮ್ಮೆಯ ವಿಷಯವಾಗಿದೆ. ಈ ಐತಿಹಾಸಿಕ ಗೋಲಗುಮ್ಮಟಕ್ಕೆ ರೆನ್ಯೂ ಎನರ್ಜಿ ಪ್ರೆöÊ.ಲಿ. ಸಿಎಸ್‌ಆರ್ ಅನುದಾನದಲ್ಲಿ ೪೦ ಲಕ್ಷ ರೂ. ವೆಚ್ಚದಲ್ಲಿ ಸೌರಶಕ್ತಿ ದೀಪಾಲಂಕಾರ ಅಳವಡಿಸಲಾಗಿದೆ ಎಂದು ಅವರು ಹೇಳಿದರು.
ಜಿಲ್ಲೆಯ ಐತಿಹಾಸಿಕ ಸ್ಮಾರಕಗಳಾದ ಗೋಲಗುಂಬಜ್ ಹಾಗೂ ಇಬ್ರಾಹಿಂರೋಜಾ ಸ್ಮಾರಕಗಳನ್ನು ವಿಶ್ವ ಪಾರಂಪರಿಕ ಪಟ್ಟಿಗೆ ಸೇರ್ಪಡೆಗೊಳಿಸುವುದು ಬಹುಜನರ-ಬಹುದಿನಗಳ ಕನಸಾಗಿದೆ. ಈ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುತ್ತಿದೆ. ಬಾವಡಿಗಳ ಒತ್ತುವರಿ ತೆರವುಗೊಳಿಸಲು, ಸಂರಕ್ಷಣೆ ಸ್ವಚ್ಛತೆಗೆ ಭಾರತೀಯ ಸರ್ವೇಕ್ಷಣಾ ಇಲಾಖೆ ಆದ್ಯತೆ ನೀಡಬೇಕು. ಇದರೊಂದಿಗೆ ಐತಿಹಾಸಿಕ ಸ್ಮಾರಕಗಳ ರಕ್ಷಣೆಗೂ ಒತ್ತು ನೀಡಲಾಗುತ್ತಿದೆ. ಬಾವಡಿಗಳ ನೀರನ್ನು ಇನ್ನಿತರ ಬಳಕೆ ಮಾಡುವ ನಿಟ್ಟಿನಲ್ಲಿ ಐತಿಹಾಸಿಕ ಬಾವಡಿಗಳ ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ. ಅರಣ್ಯೀಕರಣಕ್ಕೆ ಒತ್ತು ನೀಡುವ ನಿಟ್ಟಿನಲ್ಲಿ ವೃಕ್ಷಥಾನ್ ಹಮ್ಮಿಕೊಳ್ಳಲಾಗಿದೆ ಎಂದು ಅವರು ಹೇಳಿದರು.
ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಮಾತನಾಡಿ, ನಗರದ ಪ್ರಮುಖ ಸ್ಥಳವಾದ ಗಗನ್ ಮಹಲ್‌ನ ಕಂದಕ ಸ್ವಚ್ಛಗೊಳಿಸಿ, ಅಭಿವೃದ್ದಿಪಡಿಸಿ ಗಗನ್ ಮಹಲ್ ವಾತಾವರಣ ಉನ್ನತೀಕರಣಕ್ಕೆ ಸರ್ಕಾರ ೧.೫ ಕೋಟಿ ಬಿಡುಗಡೆ ಮಾಡಿದೆ. ಶೀಘ್ರದಲ್ಲಿ ಕಾಮಗಾರಿ ಆರಂಭಿಸಲಾಗುವುದು. ೫೦ ಲಕ್ಷ ರೂ. ವೆಚ್ಚದಲ್ಲಿ ಆನಂದ ಮಹಲ್ ಉದ್ಯಾನವನ ಸೇರಿದಂತೆೆ ಇತರೆ ಅಭಿವೃದ್ದಿ ಕಾಮಗಾರಿಗೆ ವಿಜಯಪುರ ನಗರಾಭಿವೃದ್ದಿ ಪ್ರಾಧಿಕಾರದಿಂದ ಅನುಮತಿ ನೀಡಲಾಗಿದೆ. ಬಸವನಬಾಗೇವಾಡಿ ಅಭಿವೃದ್ದಿ ಪ್ರಾಧಿಕಾರದಿಂದ ವಿವಿಧ ತಾಣಗಳ ಅಭಿವೃದ್ದಿಪಡಿಸಲಾಗುತ್ತಿದೆ. ಆಲಮಟ್ಟಿಯಲ್ಲಿ ಪ್ರವಾಸೋದ್ಯ ಮಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ವಿವಿಧ ಚಟುವಟಿಕೆಗಳನ್ನು ನೀರಾವರಿ ಇಲಾಖೆ ಮೂಲಕ ಹಮ್ಮಿಕೊಳ್ಳಲಾಗುತ್ತಿದೆ ಎಂದು ಅವರು ಹೇಳಿದರು.
ನಗರದಲ್ಲಿನ ಐತಿಹಾಸಿಕ ತಾಜ್‌ಬಾವಡಿ ೮ ಕೋಟಿ ವೆಚ್ಚದಲ್ಲಿ ಟಾಟಾ ಕನ್ಸಲ್ಟನ್ಸಿ ಸರ್ವಿಸಸ್ ಸಿ.ಎಸ್.ಆರ್. ಅನುದಾನದಲ್ಲಿ ಅಭಿವೃದ್ದಿಪಡಿಸಲಾಗುತ್ತಿದೆ. ಸಚಿವರ ಪ್ರಯತ್ನದಿಂದ ಕುಮಟಗಿ ಬೇಸಿಗೆ ಅರಮನೆಯನ್ನು ಇನ್ಫೋಸಿಸ್ ಫೌಂಡೇಶನ್ ಸಿ.ಎಸ್.ಆರ್. ಅನುದಾನದಲ್ಲಿ ೨ ಕೋಟಿ ವೆಚ್ಚದಲ್ಲಿ ಪುನಶ್ಚೇತನ ಸೇರಿದಂತೆ ಹಲವು ಅಭಿವೃದ್ದಿ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.
ಪ್ರವಾಸೋದ್ಯಮ ಪ್ರವಾಸಿ ತಾಣಗಳಾದ ಕುಮಟ್ಮಗಿ ಬೇಸಿಗೆ ಅರಮನೆ, ಬಾರಾಕಮಾನ್,ಜಾಮಿಯಾ ಮಸೀದಿ,ಮಲಿಕ್ ಇ ಮೈದಾನ,ಶಿವಗಿರಿ,ಜೈನ ಬಸದಿ, ಬಸವನ ಬಾಗೇವಾಡಿ, ಜ್ಞಾನಯೋಗಾಶ್ರಮ, ಆಲಮಟ್ಟಿ ಡ್ಯಾಂ, ವ್ಯವಸಾಯ ವಿಜಯಪುರದ ಕುರಿತಾಗಿ ಸಾಕ್ಷ್ಯಚಿತ್ರ ಪ್ರದರ್ಶನಗೊಂಡಿತು.
ಶಹನಾಯಿ ವಾದನ :ಈ ಕಾರ್ಯಕ್ರಮದಲ್ಲಿ ಜಗತಪ್ರಸಿದ್ಧ ಗೋಳಗುಮ್ಮಟ ಆವರಣದಲ್ಲಿ ನಡೆದ ಈ ಕಾರ್ಯಕ್ರಮದ ಅಂಗವಾಗಿ ಕಲಾವಿದ ರುದ್ರೇಶ ಹಾಗೂ ಅವರ ತಂಡದಿ0ದ ನಡೆಸಿಕೊಟ್ಟ ಶಹನಾಯಿ ವಾದನ ನೆರೆದವರ ಹಾಗೂ ಸಂಗೀತಾಸಕ್ತರನ್ನು ಮಂತ್ರ ಮುಗ್ಧಗೊಳಿಸಿತು.
ಕ್ಯಾಲೆಂಡರ್ ಬಿಡುಗಡೆ : ೨೦೨೫ರ ಸಾಲಿನ ಪ್ರವಾಸೋದ್ಯಮ ಇಲಾಖೆ ಹೊರತಂದಿರುವ ದಿನದರ್ಶಿಕೆಯನ್ನು ಈ ಸಂದರ್ಭ ಬಿಡುಗಡೆಗೊಳಿಸಲಾಯಿತು. ಕಾರ್ಯಕ್ರಮದಲ್ಲಿ ನಾಗಠಾಣ ಶಾಸಕ ರಾದ ವಿಠ್ಠಲ ಕಟಕಧೋಂಡ ಮಾತನಾಡಿದರು. ಕರ್ನಾಟಕ ಬಾಲ ವಿಕಾಸ ಅಕಾಡೆಮಿಯ ಅಧ್ಯಕ್ಷರಾದ ಸಂಗಮೇಶ ಬಬಲೇಶ್ವರ,ಮೇಯರ್ ಮಹೇಜಬಿನ ಹೋರ್ತಿ,ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಕನಾನ ಮುಶ್ರೀಫ್,ಉಪ ಮೇಯರ್ ದಿನೇಶ ಹಳ್ಳಿ,ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಿಷಿ ಆನಂದ,ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಲಕ್ಷ್ಮಣ ನಿಂಬರಗಿ, ಪ್ರವಾಸೋದ್ಯಮ ಇಲಾಖೆಯ ಜಂಟಿ ನಿರ್ದೇಶಕರಾದ ಸೌಮ್ಯಾ ಬಾಪಟ್, ರಿನ್ಯೂ ಎನರ್ಜಿ ಪ್ರೆöÊ.ಲಿ. ರಾಜ್ಯ ಮುಖಸ್ಥ ಮಧುಸೂಧನ, ಪುರಾತತ್ವ ಇಲಾಖೆಯ ಅಧಿಕ್ಷಕ ರಮೇಶ ಮೂಲಿಮನಿ,ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಶಿವಶರಣಯ್ಯ, ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ಮಲ್ಲಿಕಾರ್ಜುನ ಭಜಂತ್ರಿ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ವೃಕ್ಷಥಾನ ಸ್ಪರ್ಧಿಗಳು ಉಪಸ್ಥಿತರಿದ್ದರು.
Thursday, December 19, 2024
ವಸತಿ ನಿಲಯ ಪಾಲಕರಿಗೆ ವಿವಿಧ ಕಾಯ್ದೆಗಳ ಕುರಿತು ಕಾರ್ಯಾಗಾರ; ನ್ಯಾಯಾಧೀಶರಿಂದ ಚಾಲನೆ
ವಸತಿ ನಿಲಯ ಪಾಲಕರಿಗೆ ವಿವಿಧ ಕಾಯ್ದೆಗಳ ಕುರಿತು ಕಾರ್ಯಾಗಾರ; ನ್ಯಾಯಾಧೀಶರಿಂದ ಚಾಲನೆ
ಮಕ್ಕಳ ದೈನಂದಿನ ಚಟುವಟಿಕೆಗಳ ಮೇಲೆ ನಿಗಾ ಇಡಿ; ಹೆಚ್.ಎ.ಸಾತ್ವಿಕ್
ರಾಯಚೂರು :- ಜಿಲ್ಲೆಯ ಮುಗ್ಧ ಮನಸ್ಸಿನ ಮಕ್ಕಳ ಸಂಪೂರ್ಣ ರಕ್ಷಣೆ ನಿಲಯ ಪಾಲಕರಾಗಿದ್ದು, ಮಕ್ಕಳ ದೈನಂದಿನ ಚಟುವಟಿಕೆಗಳ ಮೇಲೆ ನಿಗಾ ಇಡಬೇಕು. ಪೋಕ್ಸೋ ಸೇರಿದಂತೆ ಇತರೆ ಕಾಯ್ದೆಗಳ ಕುರಿತು ತಿಳಿವಳಿಕೆ ಮೂಡಿಸಬೇಕೆಂದು ಹಿರಿಯ ಶ್ರೇಣಿ ದಿವಾಣಿ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಹೆಚ್.ಎ.ಸಾತ್ವಿಕ್ ಅವರು ಹೇಳಿದರು.
ಅವರು ಡಿ.19ರ ಗುರುವಾರ ದಂದು ನಗರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಚೇರಿ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಮಕ್ಕಳ ಹಕ್ಕಗಳ ರಕ್ಷಣಾ ಆಯೋಗ ಬೆಂಗಳೂರು, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಹಾಗೂ ಮಕ್ಕಳ ರಕ್ಷಣಾ ಘಟಕದ ಸಂಯುಕ್ತಾಶ್ರಯದಲ್ಲಿ ಬಾಲ್ಯವಿವಾಹ ನಿಷೇಧ ಕಾಯ್ದೆ-2006, ಪೋಕ್ಸೋ ಕಾಯ್ದೆ-2012, ಬಾಲನ್ಯಾಯ ಕಾಯ್ದೆ-2015ರ ಕುರಿತು ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯ ಪಾಲಕರಿಗೆ ಒಂದು ದಿನದ ಜಾಗೃತಿ ಕಾರ್ಯಾಗಾರಕ್ಕೆ ಚಾಲನೆ ನೀಡಿ, ಮಾತನಾಡಿದರು.
ನಿಲಯ ಪಾಲಕರು ಮಕ್ಕಳ ದೈನಂದಿನ ಚಟುವಟಿಕೆಗಳ ಮೇಲೆ ನಿಗಾ ಇಡಬೇಕು. ಪೋಕ್ಸೋ ಕಾಯ್ದೆಯಡಿ ನ್ಯಾಯಾಲಯದಲ್ಲಿ ಹೆಚ್ಚು ಪ್ರಕರಣಗಳು ಬರುತ್ತಿವೆ. ಪೋಕ್ಸೋ ಕಾಯ್ದೆಯು ಗಂಭೀರವಾದ ಪ್ರಕರಣವಾಗಿದೆ. ನಿರ್ಭಯ ಪ್ರಕರಣದಂತ ಪ್ರಕರಣಗಳು ಮರುಕಳಿಸಬಾರದು ಎಂಬ ಉದ್ದೇಶದಿಂದ ಪೋಕ್ಸೋ ಕಾಯ್ದೆಯನ್ನು ಜಾರಿಗೆ ತರಲಾಗಿದೆ. ಜೊತೆಗೆ ಬಿಎನ್‌ಎಸ್ ಕಾಯಿದೆಯು ಮಕ್ಕಳ ಬಗ್ಗೆ ಕಾಳಜಿವಹಿಸುತ್ತಿದೆ ಎಂದರು.
ಮಕ್ಕಳ ಹಕ್ಕುಗಳನ್ನು ನಿರ್ಲಕ್ಷ ಮಾಡಬಾರದು. ಮಕ್ಕಳ ರಕ್ಷಣೆಗಾಗಿ ಹಲವಾರು ಘಟಕಗಳು ಜಾರಿಗೆ ಬಂದಿವೆ. ಎಲ್ಲರೂ ಮಕ್ಕಳ ಹಕ್ಕುಗಳ ರಕ್ಷಣೆ ಮಾಡಬೇಕು. ಅದು ಎಲ್ಲರ ಆದ್ಯಕರ್ತವ್ಯವಾಗಿದೆ. ನಿಲಯಪಾಲಕರು ಕಾಯ್ದೆಗಳ ಬಗ್ಗೆ ಸರಿಯಾಗಿ ತಿಳಿದುಕೊಂಡು ಕಾರ್ಯಾಗಾರದ ಸದುಪಯೋಗ ಪಡೆಯಬೇಕೆಂದು ಸಲಹೆ ನೀಡಿದರು.
ಈ ವೇಳೆ ಕರ್ನಾಟಕ ರಾಜ್ಯ ಮಕ್ಕಳ ಹಕ್ಕಗಳ ರಕ್ಷಣಾ ಆಯೋಗದ ಸದಸ್ಯರಾದ ವೆಂಕಟೇಶ ಅವರು ಮಾತನಾಡಿ, ಪೋಕ್ಸೋ ಕಾಯ್ದೆಯು ಕಠಿಣ ಹಾಗೂ ಮಕ್ಕಳ ಸ್ನೇಹಿಯಾಗಿದೆ. ಸರ್ಕಾರಿ ವಿದ್ಯಾರ್ಥಿ ನಿಲಯ ಹಾಗೂ ವಸತಿ ಶಾಲೆಗಳಲ್ಲಿ ವ್ಯಾಸಂಗ ಮಾಡಲು ಬರುವ ಮಕ್ಕಳು ಸಾಮಾನ್ಯವಾಗಿ ಬಡವರ ಮನೆಯ ಮಕ್ಕಳಾಗಿರುತ್ತಾರೆ. ಮನೆಯ ವಾತಾವರಣದಿಂದ ಸರ್ಕಾರಿ ಹಾಸ್ಟೆಲ್‌ಗಳಿಗೆ ಬಂದಿರುತ್ತಾರೆ. ಹೀಗಾಗಿ ಹಾಸ್ಟೆಲ್‌ಗಳಲ್ಲಿನ ವಿದ್ಯಾರ್ಥಿಗಳನ್ನು ವಾರ್ಡನ್‌ಗಳು, ಸಿಬ್ಬಂದಿ ಕೂಡ ತಮ್ಮ ಮಕ್ಕಳಂತೆಯೇ ನೋಡಿಕೊಳ್ಳಬೇಕೆಂದರು.
ರಾಜ್ಯದಲ್ಲಿ ರಾಯಚೂರು ಜಿಲ್ಲೆಯು ಸಾಮಾಜಿಕ, ಆರ್ಥಿಕ, ಶೈಕ್ಷಣಿಕವಾಗಿ ಗುರುತಿಸುವ ರೀತಿಯಲ್ಲಿ ಮಾಡಬೇಕು. ಮಕ್ಕಳಿಗೆ ಮಹಾತ್ಮರ ಜೀವನ ಚೆರಿತ್ರೆಯನ್ನು ತಿಳಿಸುವ ಕಾರ್ಯ ನಿಲಯ ಪಾಲಕರಿಂದ ಆಗಬೇಕು. ಅಲ್ಲದೆ ವಸತಿ ನಿಲಯಗಳಲ್ಲಿ ಸ್ವಚ್ಛತೆ ಹಾಗೂ ಆಹಾರ ಗುಣಮಟ್ಟವನ್ನು ಕಾಪಾಡಬೇಕೆಂದು ಸಲಹೆ ನೀಡಿದರು.
ರಿಮ್ಸ್ ಆಸ್ಪತ್ರೆಯ ಮಕ್ಕಳ ಮಾನಸಿಕ ಆರೋಗ್ಯ ತಜ್ಞ ಡಾ.ರಮೇಶ್ ಬಾಬು ಅವರು ಮಾತನಾಡಿ, ಮೊದಲು ನಾವು ಸುಧಾರಣೆಯಾಗಬೇಕು. ನಂತರ ಸಮಾಜವನ್ನು ಸುಧಾರಣೆ ಮಾಡುವ ಮೂಲಕ ಸಮಾಜದಲ್ಲಿನ ಮೌಡ್ಯತ್ವವನ್ನು ತೆಗೆಯಬೇಕು. ಅಲ್ಲದೆ ಜಿಲ್ಲೆಯಲ್ಲಿ ಮಕ್ಕಳ ಮೇಲಿನ ದೌರ್ಜನ್ಯ ಘಟನೆಗಳು ಆಗದಂತೆ ನೋಡಿಕೊಳ್ಳಬೇಕೆಂದರು.
ಪ್ರಾಸ್ತವಿಕವಾಗಿ ಜಿಲ್ಲಾ ಮಕ್ಕಳ ಘಟಕದ ರಕ್ಷಣಾಧಿಕಾರಿ ಅಮರೇಶ ಅವರು ಮಾತನಾಡಿ, ವಸತಿ ನಿಲಯಗಳಲ್ಲಿನ ಮಕ್ಕಳ ರಕ್ಷಣೆ ಮಾಡುವುದು ನಿಲಯ ಪಾಲಕರ ಆದ್ಯ ಕರ್ತವ್ಯವಾಗಿದ್ದು, ಎಲ್ಲ ನಿಲಯ ಪಾಲಕರು ಕಾಯಿದೆಗಳನ್ನು ಸರಿಯಾಗಿ ತಿಳಿದುಕೊಂಡು ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕು. ಸಮಾಜ ನಮ್ಮನ್ನು ಸೂಕ್ಷ್ಮವಾಗಿ ಗಮನಿಸುತ್ತದೆ ಅದನ್ನು ಅರಿತುಕೊಂಡು ನಿಲಯಪಾಲಕರು ಕಾರ್ಯನಿರ್ವಹಿಸಬೇಕೆಂದು ಹೇಳಿದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷರಾದ ಮಂಗಳಾ ಹೆಗಡೆ, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ಚಿದಾನಂದ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ನಿರೂಣಾಧಿಕಾರಿ ಶರಣಮ್ಮ, ಮಕ್ಕಳ ಸಂಯೋಜಕರಾದ ಸುದರ್ಶನ ಸೇರಿದಂತೆ ಇತರರು ಇದ್ದರು.
ದಿಲ್ಲಿ ಆರ್ಟ್ ಗ್ಯಾಲರಿಯ ಸಿಸಿಟಿವಿ ಫೂಟೇಜ್ ಸುರಕ್ಷಿತವಾಗಿಡಲು ಆದೇಶಿಸಿದ ಪಟಿಯಾಲ ನ್ಯಾಯಾಲಯ
ದಿಲ್ಲಿ ಆರ್ಟ್ ಗ್ಯಾಲರಿಯ ಸಿಸಿಟಿವಿ ಫೂಟೇಜ್ ಸುರಕ್ಷಿತವಾಗಿಡಲು ಆದೇಶಿಸಿದ ಪಟಿಯಾಲ ನ್ಯಾಯಾಲಯ
ನವದೆಹಲಿ - ಹಿಂದೂದ್ವೇಷಿ ಚಿತ್ರಕಾರ ಎಂ. ಎಫ್ ಹುಸೇನ್ ಇವರ ಹಿಂದೂ ದೇವಿ-ದೇವತೆಗಳ ಆಕ್ಷೇಪಾರ್ಹ ಚಿತ್ರಗಳನ್ನು ಪ್ರದರ್ಶನಕ್ಕೆ ಇರಿಸಿದ್ದ ಪ್ರಕರಣದಲ್ಲಿ ಹಿಂದೂ ಜನಜಾಗೃತಿ ಸಮಿತಿ ಮತ್ತು ಇತರ ಹಿಂದುತ್ವನಿಷ್ಠ ಸಂಘಟನೆಗಳಿಂದ ನೀಡಲಾದ ದೂರಿನ ನಂತರ ಮಹತ್ವಪೂರ್ಣ ತೀರ್ಪು ಬಂದಿದೆ. ಪಟಿಯಾಲ ಹೌಸ್ ನ್ಯಾಯಾಲಯದಲ್ಲಿ ಮಹಾನಗರ ದಂಡಾಧಿಕಾರಿ ಸಾಹಿಲ ಮೋಂಗ ಇವರು ಡಿಸೆಂಬರ್ 4 ರಿಂದ ಡಿಸೆಂಬರ್ 10, 2024 ವರೆಗಿನ ಸಿಸಿಟಿವಿ ಫೂಟೇಜ್ ಗಳನ್ನು ಸುರಕ್ಷಿತವಾಗಿರಿಸಲು ಪೊಲೀಸರಿಗೆ ಆದೇಶ ನೀಡಿದೆ.
ಇದರಲ್ಲಿ ಹಿಂದೂ ಜನಜಾಗೃತಿ ಸಮಿತಿಯ ವಕ್ತಾರ ಶ್ರೀ. ನರೇಂದ್ರ ಸುರ್ವೆ ಇವರು, ಈ ಆದೇಶ ಹಿಂದೂ ಧರ್ಮ ರಕ್ಷಣೆಗಾಗಿ ಹೋರಾಡುವ ಯೋಧರ ಮತ್ತು ಹಿಂದೂ ಸಂಘಟನೆಗಳ ದೊಡ್ಡ ಗೆಲುವಾಗಿದೆ. ಈ ಆದೇಶದಿಂದ ಸತ್ಯ ಬೆಳಕಿಗೆ ತರಲು ಸಹಾಯವಾಗಲಿದೆ. ನಾವು ಸರಕಾರಕ್ಕೆ ಅಪರಾಧ ಮರೆಮಾಚಲು ಸಾಕ್ಷಿ ನಾಶ ಮಾಡುವವರ ಮೇಲೆ ಕಾನೂನು ರೀತಿಯಲ್ಲಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸುತ್ತೇವೆ ಎಂದರು.
ದಿಲ್ಲಿ ಆರ್ಟ್ ಗ್ಯಾಲರಿಯಲ್ಲಿನ ‘ಹುಸೇನ್ : ದ ಟೈಮಲೇಸ್ ಮಾಡರ್ನಿಸ್ಟ್' ಈ ಪ್ರದರ್ಶನದಲ್ಲಿ ಹಿಂದೂ ದೇವಿ ದೇವತೆಯರ ನಗ್ನ ಮತ್ತು ಆಕ್ಷೇಪಾರ್ಹ ಚಿತ್ರಗಳ ಸಮಾವೇಶವಿತ್ತು. ಇದರಲ್ಲಿ ಒಂದು ಚಿತ್ರದಲ್ಲಿ ಭಗವಂತ ಗಣೇಶನ ತೊಡೆಯ ಮೇಲೆ ನಗ್ನ ಸ್ತ್ರೀ (ಬಹುತೇಕ ರೀದ್ಧಿ/ಸಿದ್ಧಿ) ತೋರಿಸಲಾಗಿದೆ. ಇನ್ನೊಂದು ಚಿತ್ರದಲ್ಲಿ ಭಗವಂತ ಹನುಮಂತ ಓರ್ವ ನಗ್ನ ಸ್ತ್ರೀಗೆ (ಬಹುಶಃ ಸೀತಾ ಮಾತೆ) ಕೈಯಲ್ಲಿ ಹಿಡಿದು ಹಾರುತ್ತಿರುವುದು ಕಾಣುತ್ತಿದೆ. ಇನ್ನೊಂದು ಚಿತ್ರದಲ್ಲಿ ಶಂಕರನ ತೊಡೆಯ ಮೇಲೆ ಅತ್ಯಂತ ಆಕ್ಷೇಪಾರ್ಹ ರೀತಿಯಲ್ಲಿ ತೋರಿಸಲಾಗಿದೆ. ಈ ಚಿತ್ರಗಳಿಂದ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಪ್ರಯತ್ನಪೂರ್ವಕವಾಗಿ ನೋವುಂಟು ಮಾಡುವುದಕ್ಕಾಗಿ ರೂಪಗೊಂಡಿವೆ ಎಂದು ಸ್ಪಷ್ಟವಾಗುತ್ತದೆ. ಸಮಿತಿಯು ಭಾರತೀಯ ದಂಡ ವಿಧಾನ ಕಲಂ 295 (A) ಮತ್ತು ನ್ಯಾಯ ಸಂಹಿತೆ ಕಲಂ 299 ಅಂತರ್ಗತ ಆಯೋಜಕರ ಮೇಲೆ ಕಠಿಣ ಕ್ರಮ ಕೈಗೊಳ್ಳಲು ಆಗ್ರಹಿಸಲಾಗಿತ್ತು.
ದೂರಿನ ನಂತರ ಗ್ಯಾಲರಿ ವ್ಯವಸ್ಥಾಪಕರಿಂದ ವಿವಾದಿತ ಚಿತ್ರಗಳು ಗೌಪ್ಯವಾಗಿ ತೆಗೆಯಲಾದವು; ಆದರೆ ಪೊಲೀಸ್ ವಿಚಾರಣೆಯಲ್ಲಿ ಈ ಚಿತ್ರಗಳು ಪ್ರದರ್ಶನಗೊಂಡಿರುವುದರ ಕುರಿತು ನಿರಾಕರಿಸಿದರು. ಸಮಿತಿಯ ನ್ಯಾಯವಾದಿ ಅಮಿತಾ ಸಚದೇವ್ ಮತ್ತು ಇತರರು ಪಟಿಯಾಲ ನ್ಯಾಯಾಲಯದಲ್ಲಿ ಸುರಕ್ಷಿತ ಇರಿಸಲು ಮತ್ತು ಪ್ರಥಮ ಮಾಹಿತಿ ವರದಿ (ಎಫ್.ಐ.ಆರ್) ದಾಖಲಿಸಲು ಆಗ್ರಹಿಸಿದ್ದಾರೆ. ಸನ್ಮಾನ್ಯ ನ್ಯಾಯಾಲಯವು ಈ ಬೇಡಿಕೆ ಒಪ್ಪಿಕೊಂಡು ದೆಹಲಿ ಪೊಲೀಸರಿಗೆ ಆದೇಶ ನೀಡಿರುವುದು, ಸಂಬಂಧಿತ ಕಾಲಾವಧಿಯಲ್ಲಿನ ಫೂಟೇಜ್ ಸುರಕ್ಷಿತ ಇರಿಸಬೇಕು ಮತ್ತು ವರದಿ ಪ್ರಸ್ತುತಪಡಿಸಬೇಕು. ಮುಂದಿನ ವಿಚಾರಣೆ ಜನವರಿ 4, 2025 ರಂದು ನಡೆಯುವುದು ಎಂದು ಹೇಳಿದೆ.
ಈ ಹೋರಾಟದಲ್ಲಿ ಸರ್ವೋಚ್ಚ ನ್ಯಾಯಾಲಯದ ಹಿರಿಯ ನ್ಯಾಯವಾದಿ ಮಕರಂದ ಆಡಕರ, ನ್ಯಾಯವಾದಿ ಶಾಂತನು, ನ್ಯಾಯವಾದಿ ಕೇಸರಿ, ನ್ಯಾಯವಾದಿ ವಿಕ್ರಂ, ನ್ಯಾಯವಾದಿ ಯಾದವೇಂದ್ರ, ಸನಾತನ ಸ್ವಾಭಿಮಾನ ಸಭೆಯ ಅಧ್ಯಕ್ಷ ಬ್ರಿಜೇಶ್ ಶರ್ಮಾ ಮತ್ತು ಸಮಿತಿಯ ವಕ್ತಾರರು ಶ್ರೀ. ನರೇಂದ್ರ ಸುರ್ವೆ ಇವರು ಸಹಭಾಗಿಯಿದ್ದರು.