ತಾಂತ್ರಿಕ ಸಮಿತಿ ವರದಿ ಆಧರಿಸಿ ಕಾರಂಜಾ ಮುಳುಗಡೆ ಸಂತ್ರಸ್ತರಿಗೆ ಪರಿಹಾರ ನೀಡಲಾಗುವುದು ಮುಖ್ಯಮಂತ್ರಿಗಳ ಘೋಷಣೆ
ಕಾರಂಜಾ ಸಂತ್ರಸ್ತರು ನ್ಯಾಯಯುತವಾದ ಬೇಡಿಕೆಗೆ ಒತ್ತಾಯಿಸಿ ನಡೆಸುತ್ತಿರುವ ಹೋರಾಟಕ್ಕೆ ಸ್ಪಂದಿಸಿ ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ ಖಂಡ್ರೆಯವರ ಮುತುವರ್ಜಿಯಿಂದ ಮತ್ತು ಜಿಲ್ಲೆಯ ಶಾಸಕರುಗಳ ಪಕ್ಷಾತೀತ ರಾಜಕೀಯ ಒಗ್ಗಟ್ಟಿನಿಂದ ದಿ.19-12-2024 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಧ್ಯಕ್ಷತೆಯಲ್ಲಿ ಬೆಳಗಾವಿ ಸುವರ್ಣಸೌಧದ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕಾರಂಜಾ ರೈತ ಸಂತ್ರಸ್ತರಿಗೆ ವೈಜ್ಞಾನಿಕ ಆಧಾರದ ಪರಿಹಾರ ತಾಂತ್ರಿಕ ಸಮಿತಿಯ ವರದಿಯ ಆಧಾರದ ಮೇಲೆ ನೀಡುವುದಾಗಿ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.
ಕಾರಂಜಾ ಸಂತ್ರಸ್ತರ ಸುದೀರ್ಘ ಹೋರಾಟವನ್ನು ಗಮನದಲ್ಲಿಟ್ಟುಕೊಂಡು ದಿ.19-12-2024 ರಂದು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ ಖಂಡ್ರೆಯವರು ಕಾರಂಜಾ ಸಂತ್ರಸ್ತರ ಬೇಡಿಕೆಗೆ ಸ್ಪಂದಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಧಿಕೃತ ಒಪ್ಪಿಗೆ ನೀಡಿ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಸುತ್ತಿರುವದಕ್ಕೆ ಜಿಲ್ಲೆಯ ಸಚಿವರು ಕೆಕೆಆರ್ ಡಿ ಬಿಯ ಅಧ್ಯಕ್ಷರು ,ಶಾಸಕರು ಹಾಗೂ ಹೋರಾಟಗಾರರ ಪರವಾಗಿ ಮುಖ್ಯಮಂತ್ರಿಗಳಿಗೆ ಸ್ವಾಗತಿಸಿ ಕಾರಂಜಾ ಯೋಜನೆಯ ನಿರ್ಮಾಣ ಮತ್ತು ಭೂಮಿ ಕಳೆದುಕೊಂಡ ರೈತ ಸಂತ್ರಸ್ತರ ದುರ್ಗತಿ ಅದರಂತೆ ಸಂತ್ರಸ್ತರಿಗೆ ಪರಿಹಾರ ನೀಡುವ ಬಗ್ಗೆ ಒತ್ತಿ ಹೇಳಿದರು. ಇದಕ್ಕೆ ಜಿಲ್ಲೆಯ ಶಾಸಕರುಗಳಾದ ಶೈಲೇಂದ್ರ ಬೆಲ್ದಾಳೆ ,ಪ್ರಭು ಚವ್ಹಾಣ,ಶರಣು ಸಲಗಾರ, ಸಿದ್ದು ಪಾಟೀಲ, ಎಂ.ಜಿ.ಮುಳೆ, ಭೀಮರಾವ ಪಾಟೀಲ, ಮಾಜಿ ಶಾಸಕರಾದ ರಾಜಶೇಖರ ಪಾಟೀಲ, ಮಾಲಾ ಬಿ ನಾರಾಯಣ ಸೇರಿದಂತೆ ಎಲ್ಲ ರಾಜಕೀಯ ಮುಖಂಡರು ಪಕ್ಷಬೇಧ ಮರೆತು ಜಿಲ್ಲಾ ಉಸ್ತುವಾರಿ ಸಚಿವರ ಮಾತಿಗೆ ಸಮರ್ಥಿಸಿ ಬೇಡಿಕೆ ಈಡೇರಿಸಲು ಮುಖ್ಯಮಂತ್ರಿಗಳಿಗೆ ಒತ್ತಾಯಿಸಿದರು.
ಈ ಮಹತ್ವದ ಸಭೆಯಲ್ಲಿ ಕಾರಂಜಾ ರೈತ ಸಂತ್ರಸ್ತರ ಬೇಡಿಕೆ ಕುರಿತು ಮಾನವೀಯತೆ ಆಧಾರದಂತೆ ವೈಜ್ಞಾನಿಕ ಮಾದರಿಯ ಮಾನದಂಡದಂತೆ ಪರಿಹಾರ ನೀಡಿ ನ್ಯಾಯ ದೊರಕಿಸಿಕೊಡಬೇಕೆಂದು ಮುಖ್ಯಮಂತ್ರಿಗಳಿಗೆ ಕಲ್ಯಾಣ ಕರ್ನಾಟಕದ ಹಿರಿಯ ಹೋರಾಟಗಾರರಾದ ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ಸಂಸ್ಥಾಪಕ ಅಧ್ಯಕ್ಷರಾದ ಡಾ ಲಕ್ಷ್ಮಣ ದಸ್ತಿಯವರು ವಿವರವಾಗಿ ವಿವರಿಸಿದರು. ಇದಕ್ಕೆ ಪೂರಕವಾಗಿ ಕಾರಂಜಾ ಮುಳುಗಡೆ ರೈತ ಸಂತ್ರಸ್ತರ ಅಧ್ಯಕ್ಷರಾದ ಚಂದ್ರಶೇಖರ ಪಾಟೀಲರವರು ಸುದೀರ್ಘ ಕಾಲದ ಹೋರಾಟಕ್ಕೆ ಸ್ಪಂದಿಸಿ ಬೇಡಿಕೆ ಈಡೇರಿಸಲು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು. ಜಿಲ್ಲಾ ಉಸ್ತುವಾರಿ ಸಚಿವರು ಸೇರಿದಂತೆ ಎಲ್ಲಾ ಜನಪ್ರತಿನಿಧಿಗಳ ಮತ್ತು ಹೋರಾಟಗಾರರ ಒಗ್ಗಟ್ಟಿನ ಬೇಡಿಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸ್ಪಂದಿಸಿ ಮಾತನಾಡಿ ದೀರ್ಘಕಾಲದಿಂದ ನಡೆದಿರುವ ಕಾರಂಜಾ ರೈತ ಸಂತ್ರಸ್ತರ ಬೇಡಿಕೆ ಈಡೇರಿಸಲು ವೈಜ್ಞಾನಿಕ ಆಧಾರದ ಮೇಲೆ ಪರಿಹಾರ ನೀಡಲು ಒಂದು ತಾಂತ್ರಿಕ ಸಮಿತಿ ರಚನೆ ಮಾಡಲಾಗುವುದು ಅದರಂತೆ ತಾಂತ್ರಿಕ ಸಮಿತಿಗೆ ಕಾಲಮಿತಿಯಲ್ಲಿ ವರದಿ ನೀಡಲು ಸೂಚಿಸಲಾಗುವುದು. ತಾಂತ್ರಿಕ ಸಮಿತಿಯ ವರದಿಯ ಆಧಾರದ ಮೇಲೆ ಕಾರಂಜಾ ರೈತ ಸಂತ್ರಸ್ತರಿಗೆ ಪರಿಹಾರ ನೀಡಲಾಗುವುದೆಂದು ಅಧಿಕೃತವಾಗಿ ಘೋಷಣೆ ಮಾಡಿದರು.
ಈ ಮಹತ್ವದ ಸಭೆಯಲ್ಲಿ ಪೌರಾಡಳಿತ ಸಚಿವರಾದ ರಹೀಂ ಖಾನ್, ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾದ ಡಾ.ಅಜಯಸಿಂಗ್, ಅಪರ ಮುಖ್ಯ ಕಾರ್ಯದರ್ಶಿಗಳು, ನೀರಾವರಿ ಕಾರ್ಯದರ್ಶಿಗಳು, ಉನ್ನತ ಅಧಿಕಾರಿಗಳು, ಬೀದರ ಜಿಲ್ಲಾಧಿಕಾರಿಗಳು ಸೇರಿದಂತೆ ಕಾರಂಜಾ ಮುಳುಗಡೆ ಸಂತ್ರಸ್ತರ ಹೋರಾಟ ಸಮಿತಿಯ ಮುಖಂಡರಾದ ರಾಜಪ್ಪಾ ಕಮಲಪೂರ, ರಾಜಶೇಖರ ಬುಸ್ಸಾ, ನಾಗಶೆಟ್ಟಿ ಹಚ್ಚೆ, ಮಾದಪ್ಪಾ, ರೋಹನ, ಮಹೇಶ ಮುಲಗೆ, ಕೇದರನಾಥ ಪಾಟೀಲ, ಮನ್ನಾನ ಪಟೇಲ, ಇವರನ್ನೊಳಗೊಂಡು 28 ಹಳ್ಳಿಗಳ ಸುಮಾರು 50 ಸಂತ್ರಸ್ತ ಮುಖಂಡರು ಉಪಸ್ಥಿತರಿದ್ದರು.

No comments:
Post a Comment